ಮನೆಯ ತೋಟದಲ್ಲೊಂದು ಹಕ್ಕಿ ಸುಂದರವಾದ ಗೂಡು ಕಟ್ಟುತ್ತಿತ್ತು . ದಿನವೂ ಈ ಆರ್ಕಿಟೆಕ್ಚರಿ ನೋಡಿಕೊಂಡು ಬರುತ್ತಿದ್ದೆ. ಒಂದೊಂದೇ ಕಡ್ಡಿಗಳನ್ನು ಕೊಕ್ಕಿನಿಂದ ಹೆಕ್ಕಿ ಹೆಕ್ಕಿ ಅರಮನೆ ಕಟ್ಟಿದ ಹಕ್ಕಿ ಸಂಗಾತಿಯ ಜೊತೆಗೂಡಿತು. ಕೆಲದಿನಗಳಲ್ಲಿ ಐದಾರು ಮೊಟ್ಟೆಗಳು. ಮತ್ತ್ಹಲವು ದಿನದಲ್ಲಿ ಚೀಂವ್ ಗುಟ್ಟುತ್ತಿದ್ದವು ಮರಿಗಳು. ರೆಕ್ಕೆ ಬಲಿತು ಹಾರಿದವು ಗೂಡನ್ನು ಇಲ್ಲಿಯೇ ಬಿಟ್ಟು. ಭ್ರಮವೆನಿಸಿದ ಬದುಕು- ತಾತ್ಕಾಲಿಕ ಬದುಕಲ್ಲೊಂದು ಶಾಶ್ವತಕ್ಕಾಗಿ ಓಡಾಡುವ ಆತುರ. ಹಕ್ಕಿ ಬಿಟ್ಟು ಹೋದ ಆ ಗೂಡೂ ಕಳಿಸಿತು ಬಹಳಷ್ಟು ಪಾಠ...
- ಕಾವ್ಯಮಯಿ
.jpg)
No comments:
Post a Comment